Thursday, May 1, 2025

ನಿನ್ನ ಕುಣಿತದಿಂದ, ಎಲ್ಲಾ ಚಂದ ಚಂದ


ನೂಪುರ ನಾದದಿ ನಲಿಯುತಿಹೆ
ನಲ್ಮೆಯ ನಲ್ಲೆಯು ನೀನೆನಗೆ
ನೃತ್ಯದಿ ನನ್ನಯ ಕಣ್ಸೆಳೆದೆ
ನಿಲ್ಲದು ನನ್ನಲಿ ಮುಗುಳುನಗೆ

ಮನದಿ ಮಂತ್ರವ ಮೂಡಿಸು ನೀ
ಮರ್ಮವ ಭೇದಿಸು ಧೀಂತಕಿತಾ
ಮಾನಸ ವೇದಿಕೆ ಕಲ್ಪಿಸು ನೀ
ಮಂಥನ ಮಾಡುವ ಝಲ್ಲೆನುತಾ