Monday, August 7, 2017

ಗೆಳೆತನದ ಓಲೆ

ಸ್ನೇಹ ಜ್ಯೊತಿಯ​ ಬೆಳಗಿಸಿದ​ ದೀಪ್ತಿ
ತರುವೆ ನೀನು ಎಲ್ಲೆಡೆ ಸಂತೃಪ್ತಿ
ಪಸರಿಸಲಲ್ಲಲ್ಲಿ ನಿನ್ನ ಕೀರ್ತಿ
ಸತಾಯಿಸುವೆ, ಕ್ಷಮಿಸಿಬಿಡು ಗೆಳತಿ

ಬೆಳಗುತಿರಲು ನೀ ಹಣತೆ
ಮೆಚ್ಚಿದೆ ನಿನ್ನೀ ಘನತೆ
ಅಚ್ಚರಿ ಎನಿಸುವ​ ಕ್ಷಮತೆ
ಸುನಯನೆ ಚಾರುಸುಶೊಭಿತೆ
ಎಲ್ಲರಿಂದಲೂ ಪ್ರಶಂಸಿತೆ
ನಗುತಿರು ಎಂದೆಂದಿಗೂ ಸುಸ್ಮಿತೆ

ಇಗೊ ಓದು ನಿನ್ನಯ​ ಕಿರು ಅವಲೊಕನ​:
ಜ್ಞಾನ​-ಸೌಂದರ್ಯಗಳ​ ಸಮ್ಮಿಲನ​
ಸಕಲಪ್ರತಿಭೆಗಳ​ ಅನಾವರಣ​
ನೊಂದ ಮನಸುಗಳಿಗೆ ಆಶಾಕಿರಣ​

ಯಾರೀ ಬಾಲೆ? ಅಸಾಮಾನ್ಯ
ಇವಳ​ ನಡತೆ ಸದಾ ಆರಾಧ್ಯ​
ಎಂಥಾ ಸೊಬಗು ಎಂಥಾ ಲಾಲಿತ್ಯ​
ಎಲ್ಲವ​ ತಲೆದೂಗಿಸುವ​ ಪಾಂಡಿತ್ಯ​
ಈಕೆಯ ಒಡನಾಟ​ ಅತ್ಯಮೂಲ್ಯ​
ಇವಳ ಬಲ್ಲೆನೆಂಬುದೇ ಸೌಭಾಗ್ಯ

No comments: