ಸ್ನೇಹ ಜ್ಯೊತಿಯ ಬೆಳಗಿಸಿದ ದೀಪ್ತಿ
ತರುವೆ ನೀನು ಎಲ್ಲೆಡೆ ಸಂತೃಪ್ತಿ
ಪಸರಿಸಲಲ್ಲಲ್ಲಿ ನಿನ್ನ ಕೀರ್ತಿ
ಸತಾಯಿಸುವೆ, ಕ್ಷಮಿಸಿಬಿಡು ಗೆಳತಿ
ತರುವೆ ನೀನು ಎಲ್ಲೆಡೆ ಸಂತೃಪ್ತಿ
ಪಸರಿಸಲಲ್ಲಲ್ಲಿ ನಿನ್ನ ಕೀರ್ತಿ
ಸತಾಯಿಸುವೆ, ಕ್ಷಮಿಸಿಬಿಡು ಗೆಳತಿ
ಬೆಳಗುತಿರಲು ನೀ ಹಣತೆ
ಮೆಚ್ಚಿದೆ ನಿನ್ನೀ ಘನತೆ
ಅಚ್ಚರಿ ಎನಿಸುವ ಕ್ಷಮತೆ
ಸುನಯನೆ ಚಾರುಸುಶೊಭಿತೆ
ಎಲ್ಲರಿಂದಲೂ ಪ್ರಶಂಸಿತೆ
ನಗುತಿರು ಎಂದೆಂದಿಗೂ ಸುಸ್ಮಿತೆ
ಇಗೊ ಓದು ನಿನ್ನಯ ಕಿರು ಅವಲೊಕನ:
ಜ್ಞಾನ-ಸೌಂದರ್ಯಗಳ ಸಮ್ಮಿಲನ
ಸಕಲಪ್ರತಿಭೆಗಳ ಅನಾವರಣ
ನೊಂದ ಮನಸುಗಳಿಗೆ ಆಶಾಕಿರಣ
ಯಾರೀ ಬಾಲೆ? ಅಸಾಮಾನ್ಯ
ಇವಳ ನಡತೆ ಸದಾ ಆರಾಧ್ಯ
ಎಂಥಾ ಸೊಬಗು ಎಂಥಾ ಲಾಲಿತ್ಯ
ಎಲ್ಲವ ತಲೆದೂಗಿಸುವ ಪಾಂಡಿತ್ಯ
ಈಕೆಯ ಒಡನಾಟ ಅತ್ಯಮೂಲ್ಯ
ಇವಳ ಬಲ್ಲೆನೆಂಬುದೇ ಸೌಭಾಗ್ಯ