Sunday, May 2, 2021

Last Poem

Why should I write?
For there's no one to read
All the space around
Is taken up by the popular
I stay for now a misfit
'cause there's nowhere to go
What do I do here?
Neither numbers nor men
Everyone talks big
Sermons - left, right n centre
None to understand
None to delve deep enough
They see me jealous
Negative, sick and complaining
I hold no talents
Nor poise, patience and class
Agreed I'm flawed
Just a cribby lesser mortal

Tuesday, February 16, 2021

ಮಹಾಬದಲಾವಣೆಯಾದಾಗ


ಮಾತು ಪಲ್ಲವಿಯಾದರೆ ಮೌನ ಚರಣವೆನಿಸಿತು
ಬೇಡವೆಂಬುದೆಲ್ಲವು ಬೇಕು ಎನಿಸತೊಡಗಿತು
ದೂರದಿಂದ ಸಾಮಿಪ್ಯವು ಇಷ್ಟಕಾಮ್ಯವೆನಿಸಿತು
ಬಾಳ ದಿನಚರಿಯಲಿ ಹೊಸಪುಟವು ಸೃಷ್ಟಿ ಆಯಿತು

ಸುಪ್ತಮನದ ಆಳದಿ ಸಪ್ತವರ್ಣ ಮೂಡಿತು
ಹೊಸ್ತಿಲಲ್ಲಿ ಕಾಯುತ ಮಧುರದನಿಯು ಕರೆಯಿತು
ಮರುಭೂಮಿಯ ಮಡಿಲಲಿ ಒಲವ ಪುಷ್ಪವರಳಿತು
ಸಂಪೂರ್ಣತೆ ಹುಡುಕುತ ಬಾನು ರಂಗನೇರಿತು

Monday, February 1, 2021

ನೆನಪಿನ ದೋಣಿಯಲಿ

ಗೆಳತಿಯೊಬ್ಬಳು WhatsApp ನಲ್ಲಿ ತನ್ನ ಕರಾವಳಿ ಪ್ರವಾಸದ ಚಿತ್ರಗಳು ಹಂಚಿಕೊಂಡಾಗ ಚಿಕ್ಕಂದಿನ ದಿನಗಳು, ನೆನಪುಗಳು ಮರುಕಳಿಸಿದವು.

ಕಳೆದದ್ದು ಕೆಲ ತಿಂಗಳುಗಳಷ್ಟೇ. ಅನುಭವಗಳು ಅನನ್ಯ, ಅಗಣನೀಯ, ಅವಿಸ್ಮರಣೀಯ

ಉಡುಪಿ - ನಾ ಕಂಡ ಚೊಕ್ಕ ಊರು:

ಮೋಹನ ಮುರಳಿಯ ಮಾಧುರ್ಯಕ್ಕೆ ಮನಸೋತು ಆಚಾರ್ಯ ಮಧ್ವರು ಮುರಾರಿ ಮಾಧವನ ಸ್ಥಾಪಿಸಿದ ಮಹಾಪುಣ್ಯಭರಿತ ನಗರಿ
ಕನಕರ ಕರೆಗೆ ಓಗೊಟ್ಟು ಕೃಷ್ಣನು ಕಿಂಡಿಯಲ್ಲಿ ಕಂಡ ಅಚ್ಚರಿಯ ಪ್ರತೀಕ
ಗೀತೆಯ ಸಾರವ ಭವನದಿ ಭದ್ರಪಡಿಸಿ ಗೀತಾಮೃತವ ಹಂಚುವ ಯೋಚನೆ, ವಾಸ್ತುಶಿಲ್ಪ

ಮಲ್ಪೆಯ ಮುದ, ಮರವಂತೆಯ ಮಾಯೆ, ಕಾಪುವಿನ ಕಡಲದೀಪದ ಕರಾಮತ್ತು, St Mary's ಎಂಬ ಕಲ್ಲುಬಂಡೆಯ ದ್ವೀಪದ ನಗರಿ, ಕರಾವಳಿಯ ಬೆವರಿಳಿಸುವ ಹವೆ

ಮನೆಯಲ್ಲಿನ ಉಯ್ಯಾಲೆಯನ್ನು ಮನೆ owner ಮಕ್ಕಳು - ಆತ್ಮೀಯ ಅಕ್ಕ ಅಣ್ಣ ಜೀಕಿದ್ದು, ಮನೆಯಂಗಳದ ತೋಟದಲ್ಲಿ ಅಣಬೆಯ ಬೆಳವಣಿಗೆ ಕಂಡದ್ದು, ಹಾವುಗಳ ಉಭಯಕುಶಲೋಪರಿ ಭೇಟಿಗಳು. 

ತಾತನ ಜೊತೆ ಕೃಷ್ಣ ಮಾಮಿ ದೇಗುಲಕ್ಕೆ ಹೋಗಿ,
ಬರುವಾಗ chocolate ಗೋಸ್ಕರ ಹಠ ಮಾಡಿ, ಜಟಿ-ಜಟಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡು ತಡವಾದಾಗ, ಕಳೆದು ಹೋದೆವೆಂದು ಮನೆಯಲ್ಲಿ ಆತಂಕ, ನಂತರ ಇಬ್ಬರೂ ಭದ್ರವಾಗಿ ಸೇರಿದ್ದು

ಅಪ್ಪ office ಗೆ ಹೋದಮೇಲೆ ಅಮ್ಮನ ಒತ್ತಾಯಕ್ಕೆ ಹಸಿರು ಬಣ್ಣದ Sketch pen ಅಲ್ಲಿ ಬರೆದು ಕಲಿತ ಕನ್ನಡ-ದೇವನಾಗರಿ ಅಕ್ಷರಗಳು 

ಅಂಬಲಪಾಡಿ ಭೇಟಿ ಕೊಟ್ಟು ಹೊಸ ಸ್ನೇಹಿತರ ಪಡೆದದ್ದು, ಇಂದ್ರಾಳಿಗೆ ಹೋಗುವಾಗ scooter ಅಪ್ಪಳಿಸಿ ಆದ ಮೊದಲ ರಸ್ತೆ ಅಪಘಾತ

Diana, Woodlands ಹೋಟೆಲಿನ ಗಡ್ಬಡ್, ಗೋಳಿ ಬಜೆ ತಿಂದದ್ದು, Dianora box ಟಿವಿಯಲ್ಲಿ ಮೊದಮೊದಲು Aahat, Zee Horror Show ವೀಕ್ಷಿಸಿದ್ದು. ಇನ್ನಷ್ಟು ಕಥೆಗಳು, ಉಪಕಥೆಗಳು!

ಮೂರಕ್ಷರದ ಊರಿನ ಪಟಗಳು ಬಾಲ್ಯದ ಪುಟಗಳ ಮೆಲುಕಿದವು

Monday, September 21, 2020

Promises for forever

Hey Daring, Dazzling Damsel, one for you:


I may not be a knight in a flashy shining armour
Weakness for you doesn't strip me of any valour

Strength to see you eye to eye, I'd have to garner
With unwavering support, you push me to a corner

To life, you've brought peace, joy and splendour
And rekindled my spirit with renewed vigour

In every ebb and flow, I shall be your succour
Being able to explore you is truly an honour

Monday, September 7, 2020

ಎಚ್ಚರವಾದಾಗ

Christmas ರಜೆಗೆ ಇನ್ನೇನು 2-3 ದಿನ ಇದೆ ಅನ್ನುವಾಗಲೇ ಚಿಕ್ಕಮ್ಮನ ತವರಿಗೆ ಹೋಗೋಕೆ ಭಾರೀ ಸಿದ್ಧತೆಯೇ ನಡೆದಿತ್ತು. ರಾಜಹಂಸ ಬಸ್ಸನ್ನೆರಿ ಹೊರಟೆವು. ಮಧ್ಯಾಹ್ನ ಹತ್ತಿದರೆ ತಲುಪಿದ್ದು ಕತ್ತಲು ಆದಮೇಲೆ. ಎಲ್ಲರಿಗೂ ಆಯಾಸವಾಗಿತ್ತು. ಊಟಮುಗಿಸಿ ಮಲಗಿದೆವು.

ಬೆಳಗ್ಗೆ ಎದ್ದರೆ ಹಲ್ಲುಜ್ಜುವ ವೇಳೆಗೆ ಅಪ್ಪಮ್ಮಜ್ಜಿ (ಚಿಕ್ಕಮ್ಮನ ತಾಯಿ) ಘಮಘಮಿಸುವ ಬಿಸಿಬಿಸಿ ಕಾಫೀ ನಮಗಾಗಿ ಮಾಡಿದ್ದರು. ಹೇಳಿ ಕೇಳಿ ಮಲೆನಾಡಿನ ಹೊಸ್ತಿಲು, ಕಾಫಿಯ ಸ್ವಾದಕ್ಕೆ ಯಾವ ಕೊರತೆ?
ಒಮ್ಮೆಲೆ ಸವಿಯುತ್ತಾ ಹಿತ್ತಲಿಗೆ ಹೋದರೆ,
ಇನ್ನೇನು ಆಗಷ್ಟೇ ಸೂರ್ಯೋದಯವಾಗಿತ್ತು. ಮುಸುಕು ತೆರೆದ ಹವೆ, ಮುಂಜಾವಿನ ಬೆಳಕು, 
ಪ್ರಥಮ ಉಷಾಕಿರಣದ ಜೊತೆ ಆಗಸವನ್ನು ಸಿಂಗರಿಸಿದ ಜೋಡಿ ಕಾಮನಬಿಲ್ಲು. ನೋಡಲು ಎರಡು ಕಣ್ಣು ಸಾಲದು. ಈ ಸೊಬಗನ್ನು ಸೆರೆಹಿಡಿದು ಗೆಳೆಯರೆಲ್ಲರೊಡನೆ ಹಂಚಿಕೊಳ್ಳುವ ಆಸೆ. ಒಳಗಿಟ್ಟಿದ್ದ phone ತರಲು ಹೋದೆ. ನನ್ನೊಡನೆ ಮನೆಯವರೆಲ್ಲರೂ ಬಂದರು.

ಛೇ! ಹೊರಗೆ ಬಂದು ನೋಡಿದರೆ ಸತ್ವಹೀನ ಕೃತಕ ಹಣ್ಣಿನ ರಸದoತೆ ಆ ದೃಶ್ಯ ನೀರಸವಾಗಿತ್ತು. ಕಾಮನಬಿಲ್ಲು ಮಾಯವಾಗಿತ್ತು, ನೀಲಿ ಆಕಾಶವು ದೂರದ ಕಾರ್ಖಾನೆಯ ಹೊಗೆಯಿಂದ ಬೂದಿಮಯವಾಗಿತ್ತು.

ಹೀಗೆ ಮನಸಿಗೆ ಬೇಜಾರು ಆಗುತ್ತಿದ್ದಂತೆ, ಕೊಂಚ ಮೈ ಮುರಿದರೆ ಹಾಸಿಗೆಯಲ್ಲೇ ಎಚ್ಚರವಾಗುವುದೇ? 
ಅಬ್ಬಾ ಎಂಥಾ ಕನಸು! ಮುಂದೇನು ಆಗುತ್ತಿತ್ತೋ ಏನೋ? 🤦🏾‍♂️

Monday, May 11, 2020

ಮಳೆ ಬಂತು, ಮರಳಿ ಬಂದಳು ನನ್ನವಳು

ಭೂಮಿ ಬರಿದಾಗಿತ್ತು
ಬೆನ್ಬಿಡದ ಬಿಸಿಲು ಆವರಿಸಿತ್ತು
ಉಷ್ಣಾಂಶ ಏರಿತ್ತು, ಮೈಯೆಲ್ಲ ಬೆವರಿತ್ತು
ಎಷ್ಟು ನೀರು ಕುಡಿದರು ತೀರದ ದಾಹ 
ಏನೋ ಒಂತರಾ ವಿರಹ
ಸುತ್ತಲೂ ಸಡಗರ, ಆದರೆ
ಆಕೆಯಿಲ್ಲದೆ ಎಲ್ಲವೂ
ಅಪ್ರಸ್ತುತವೆನಿಸಿತ್ತು.


ದಯಮಾಡಿತಿಂದು ಬೇಸಿಗೆಮಳೆ
ಎಲೆ - ಹೂವ - ಹಣ್ಣುಗಳೆಲ್ಲವ
ತುಂತುರು ಹನಿಗಳು ಚುಂಬಿಸಿವೆ
ಮನವೂ ಹುರಿದುಂಬಿದೆ
ಕಾಕತಾಳೀಯವೋ ಏನೋ
ಮೊದಲ ಮಳೆಯಲಿ ಮಿಂದ
ಮಣ್ಣಿನ ಪರಿಮಳದಂತೆ
ಹಿಂತುರಿಗಿದಳು ಆಕೆ (ನನ್ನವಳು)

Sunday, January 12, 2020

೨೦೨೦ - ನಿನಗಾಗಿ ಕಾದಿರುವೆ

ಹೇ ದಶಮಾನದ ಹೊಸ ಸಾಲೇ,

ಕನಸಿನೂರಿಗೆ ರೂವಾರಿ ಆಗುವೆಯಾ? 
ಆಶಾದೀಪ ಹೊತ್ತ ಪ್ರಣತಿಯಾಗುವೆಯಾ?

ಉಷಃಕಾಲದ ಹೊಂಗಿರಣದಂತೆ ಆಗುವೆಯಾ?
ಅಸ್ತಮಾನದೊಳು ನವೋದಯವಾಗುವೆಯಾ?

ದಾರಿ ತಪ್ಪಿದರೆ ಧ್ರುವತಾರೆ ಆಗುವೆಯಾ?
ದಿಕ್ಸೂಚಿಯಂತೆ ಮುನ್ನಡೆಸತೊಡಗುವೆಯಾ?

ಕಡಲತೀರದಿ ಹೊಸದಿಗಂತವಾಗುವೆಯಾ?
ಬಾಳಪಥದಿ ಸಹಯಾತ್ರಿಯಾಗುವೆಯಾ?

ಎಲ್ಲವೂ ಅಗೋಚರವಾಗಿಹುದು, ಹಲವಾರು ಪ್ರಶ್ನೆಗಳು:

ಸವಿಭಾವದ ಸಹಗಮನಕೆ ಸೋಪಾನವೇ?
ಸಂಪ್ರೀತಿಯ ಸಲ್ಲಾಪದ ಸೆಳೆತವೇ?

ಆನಂದವ ಆಸ್ವಾದಿಸುವ ಆಮಂತ್ರಣವೇ?
ಆಹ್ಲಾದಕರ ಆಂತರ್ಯಕೆ ಆಕ್ರಮಣವೇ?

ಔಷಧಿಯೇ, ಔಚಿತ್ಯದ ಔದಾರ್ಯವೇ?
ಔಪಚಾರಿಕತೆಯಂಬ ಔನ್ನತ್ಯದ ಔತಣವೇ?