ಝೇಂಕಾರದ ನಿನಾದ
ಪಿಸುಗುಡುವ ಮೌನದೊಳುಅದೆಷ್ಟು ಗ್ರೀಷ್ಮಗಳ
ನೆನಪುಗಳ ಒಡನಾಟ
ಸಂತಸದ ಸಲ್ಲಾಪ
ಪ್ರತಿನಿತ್ಯ ಪರದಾಟ
ರಸಭರಿತ ರಿಂಗಣದ
ಅನವರತ ಅನ್ವೇಷಣೆ
ಸಮ್ಮತಿಯ ಸಾನ್ನಿಧ್ಯ
ಪರಿಮಳವ ಪಸರಿಸುತ
ಧಮನಿಯೊಳು ಧಾವಂತದಿ
ಬೀಳ್ಕೊಡುಗೆ ಬಯಸುತಿದೆ
ರಂಗೇರಿದ ರಂಪಾಟಗಳು
ಸವಿಮಾತಿನ ಸೆಣಸಾಟಗಳು
ಕಣ್ಸನ್ನೆಯ ಕಂಪನಗಳು
ಚಿರನೂತನ ಚೇತನಗಳು