Sunday, November 20, 2011

ಹಗಲುಗನಸು ( A daydream)

This effort is a small tribute to one of my favourite art forms - Poetry

ನನ್ನ ಹೊಂಗನಸಿಗೆ ನೀನೇ ಮುಖಪುಟ
ಅದರೊಳಗೆ ಇಂಗಿತ ಸಾವಿರಾರು ಸಂಪುಟ

ಎಲ್ಲೆಲ್ಲು ಕಂಡಿಹುದು ನಿನ್ನ ಛಾಯೆಯ ಆರ್ಭಟ
ನನ್ನನ್ನು ನಾನು ಕ್ಷಮಿಸಲಾರೆ ಕಾರಣವೀಚಟ

ಸಾಕು ಸಾಕು ನಿನ್ನ ನೆನಪುಗಳ ಚೆಲ್ಲಾಟ
ಆಗುತಿಹುದು ನನ್ನ ಮನಸಿನೊಳು ಪರದಾಟ

ಯಾರೂ ತಾರದ, ಏನೂ ಹೇಳದ ಇದೆಂಥಾ ಪ್ರಮೇಯ !
ಒಮ್ಮೊಮ್ಮೆ ಯೋಚಿಸುವೆ ಹೀಗೇಕೆ ನನ್ನೀಸಮಯ ?

ಎಂದಾದರೂ ನನಸಾಗುವುದೋ ಅರಿಯೆ ಕನಸಿನ ಪಯಣ
ಮಾಡುವುದೋ ಸೂತ್ರವಿಲ್ಲದ ಪಟದಂತೆ ಅಲ್ಲಲ್ಲಿ ಇಲ್ಲಿಲ್ಲಿ ಚಾರಣ

ಒಂದು, ಮತ್ತೊಂದು, ಮಗದೊಂದು - ಮಾತಿಗೆ ಏನೆಲ್ಲಾ ಪೀಠಿಕೆ
ಇವುಗಳಿಗೆ ನಾನಾ ಬಲ್ಲೆ ಒಂದು ಸೂಕ್ತ ಸುಂದರ ಶೀರ್ಷಿಕೆ ?

-ಶರತ್ ಮಂಜುನಾಥ್ ಅಯ್ಯರ್